Yehova Nam Prabhuve Lyrics

Tamil Christian song lyrics in Tamil script and English letters (Tanglish).

ಪಲ್ಲವಿ: ಯೆಹೋವ ನಮ್ ಪ್ರಭುವೇ ಭೂಮಿ ಆಕಾಶದೊಳು
ಮಹಿಮೆಯುಳ್ಳ ನಿನ್ ನಾಮವು ದೊಡ್ಡದು
1. ಹಗೆ ತೀರಿಸುವ ವೈರಿಗಳನ್ನು ತಡೆಗಟ್ಟಲು – ಬಾಲಕರ ಸ್ತುತಿ ಸ್ತೋತ್ರಗಳಿಂದ
ಸ್ಥಾಪಿಸಿರುವೆ ನೀ ಒಂದು ದುರ್ಗವ – ನಾ ಮರೆ ಹೋಗಲು ನಿನ್ನಾಶ್ರಯ ದುರ್ಗವ ||ಯೆಹೋ||
2. ನಿನ್ನ ಕೈ ಕೆಲಸವಾಗಿರುವ ಆಕಾಶವನ್ನು – ಚಂದ್ರ ನಕ್ಷತ್ರಗಳನ್ನೇ ನೋಡಲು
ಅವನ ದರ್ಶಿಸಿ ಜ್ಞಾಪಿಸಿಕೊಳ್ಳಲು – ಮಾನವ ಮಾತ್ರನು ಎಷ್ಟರವನು ||ಯೆಹೋ||
3. ನಿನಗಿಂತ ಮಾನವನ ಸ್ವಲ್ಪವಾಗಿಯೇ – ಕಡಿಮೆಯಾಗಿ ಮಾಡುರುವಿ ಅವನನ್ನು
ಮಹಿಮೆ ಪ್ರಭಾವ ಕಿರೀಟವನ್ನು – ಅವನಿಗೆ ಧರಿಸ ಮಾಡಿರುವಿ ||ಯೆಹೋ||
4. ಕಾಡು ಮೃಗಗಳು ಆಕಾಶ ಪಕ್ಷಿಗಳು – ಸಮುದ್ರ ಮೀನುಗಳು ಪಶುಗಳು
ಅವನಿಗೆ ಅಧೀನ ಮಾಡಿರುವಿ – ಪ್ರಭುತ್ವವನ್ನು ಅನುಗ್ರಹಿಸಿರುವಿ ||ಯೆಹೋ||
5. ನಿನ್ನ ನಾಮವು ಪ್ರಭುವೇ ಯೆಹೋವ – ಎಷ್ಟೋ ಘನತೆ ಮಹಿಮೆಯುಳ್ಳದ್ದು
ಆ ನಾಮದಿಂದ ನಮಗೆ ಕೊಟ್ಟಿರುವೀ – ನಿನ್ನ ಸ್ವರೂಪವನ್ನು ಹಲ್ಲೆಲೂಯ ||ಯೆಹೋ||
Yehova Nam Prabhuve Lyrics in English