Aradhanaiyali Bitchadhantha

Written / sung by

Tamil Christian song lyrics in Tamil script and English letters (Tanglish).

Aradhanaiyali Bitchadhantha – ಆರಾಧನೆಯಲ್ಲಿ ಬಿಚ್ಚದಂಥ ಬಂಧನವಿಲ್ಲ
ಆರಾಧನೆಯಲ್ಲಿ ಬಿಚ್ಚದಂಥ ಬಂಧನವಿಲ್ಲ
ಸ್ತುತಿಯಲ್ಲಿ ಬೀಳದಂಥ ಕೋಟೆಯಿಲ್ಲ
ಪ್ರಾರ್ಥನೆಯಲ್ಲಿ ಆಗದಂಥ ಕಾರ‍್ಯವಿಲ್ಲ
ನೀ ನಂಬಿದರೆ ನಡೆಯದ ಅಧ್ಬುತವಿಲ್ಲ
ಬೇಡಿದರೆ ದೊರೆಯುವುದು ಹುಡುಕಿದರೆ ಸಿಕ್ಕುವುದು
ತಟ್ಟಿದರೆ ತೆರೆಯುವುದು ಮುಚ್ಚಿಲ್ಪಟ್ಟ ಬಾಗಿಲು
ಅಬ್ರಹಾಮನು ದೇವರಲ್ಲಿ ನಂಬಿಕೆಯಿಟ್ಟಾಗ
ಪಾರಂಪರ‍್ಯ ಬಂಧನವೆಲ್ಲಾ ಮುರಿದೋಯಿತು
ಇಸ್ರೇಲ್ ಮಕ್ಕಳು ಆರ್ಭಟಿಸಿ ಆರಾಧಿಸಿದಾಗ
ಯೆರಿಕೋ ಕೋಟೆ ಮುರಿದುಬಿತ್ತು
ಹನ್ನ ಕಣ್ಣೀರಿಂದ ಪ್ರಾರ್ಥಿಸಲು
ಸಮುವೇಲ್ ಬಾಲಕನನ್ನು ಕೊಟ್ಟನು ದೇವಾ
ಎಲೀಷನ ಶಿಷ್ಯನ ಸಾಲಭಾರವ
ಎಣ್ಣೆಯಿಂದ ತೀರಿಸಿದ ಯೆಹೋವ ದೇವಾ